![]() |
| ನೆರಳೆಂದೂ ನಿಜವಲ್ಲ! |
ಜಗತ್ತಿನ ಸಾಗರದ ಮಧ್ಯೆ ನಾ ಯಾರೆಂಬ ಗುರುತೂ ನನಗೆ ಸಿಗುತ್ತಿಲ್ಲ. ನನಗೆಂದು ಪ್ರತ್ಯೇಕ ಅಸ್ತಿತ್ವವನ್ನು ಘೋಷಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ನಾನಿನ್ನೂ ಪರಾವಲಂಬಿ. ಜಗತ್ತು ನನ್ನನ್ನು ಯಾವುದೋ ಒಂದು ವಿಷಯದಲ್ಲಿ ಸಾಧಕನೆನ್ನಬಹುದು, ಇನ್ನೂ ಹಲವು ವಿಷಯಗಳಲ್ಲಿ ಪರಿಣತಿಯೇ ಇಲ್ಲವೆಂದು ತಿಳಿದಿರಬಹುದು. ಸತ್ಯ, ನಾನು ಖಂಡಿತಾ ಶಕ್ತ, ಆದರೆ ಸರ್ವಶಕ್ತನೇನಲ್ಲ. ಸಾಧಿಸಬೇಕಾದ್ದು ಬಹಳಷ್ಟಿದೆ. ಇಷ್ಟರವರೆಗೆ ನಾನು ಕಳೆದುಕೊಂಡದ್ದು ನಾನು ಪಡೆದದ್ದಕ್ಕಿಂತ ಹೆಚ್ಚಿರಬಹುದು, ಆದರೆ, ಆ ಕಳೆದುಕೊಂಡದ್ದಕ್ಕಿಂತ ಹೆಚ್ಚು ನಾನು ಮುಂದೆ ಪಡೆಯಬಲ್ಲೆನೆಂಬ(ಇಷ್ಟರವರೆಗೆ ಕಳೆದುಕೊಂಡದ್ದನ್ನೂ ಸೇರಿಸಿ) ವಿಶ್ವಾಸ ನಾ ಕಳೆದುಕೊಂಡಿಲ್ಲ. ನಾನಿನ್ನೂ ಕುಬ್ಜನೆಂಬ ಸತ್ಯವನ್ನು ಮನಸ್ಸಿನಲ್ಲಿ ಸದಾಕಾಲ ಇಟ್ಟುಕೊಂಡು ನನ್ನ ಪರಿಮಿತಿಯಲ್ಲಿ ಅತಿಹೆಚ್ಚು ಸಾಧಿಸಲು ಛಲದ ಬಲ ನನ್ನೊಂದಿಗಿದೆ. ಸಹಾಯಕ್ಕಾಗಿ ಜಗತ್ತಿದೆ. ನಾನೆಂದೂ ಒಬ್ಬಂಟಿಯಲ್ಲ. ಒಬ್ಬರ ಸಂಗವ ಕಳೆದುಕೊಂಡರೂ ಮುಂದೆ ಅವರೇ ಜತೆಯಾಗುವರು, ಜಗತ್ತು ದುಂಡಗಿದೆ!

0 ಪ್ರತಿಕ್ರಿಯೆಗಳು:
Post a Comment