ಕರ್ನಾಟಕದ ಕಥೆ ಏನ್ರೀ? ಏನೂ ತಿಳೀತಾನೇ ಇಲ್ಲ! ಒಂದು ಕಡೆಯಿಂದ ಕಾಮನ್ವೆಲ್ತ್,ಒಂದು ಕಡೆ ಕ್ರಿಕೆಟ್, ಇಲ್ಲಿ ನೋಡಿದ್ರೆ ಅದೆರಡೂ ಅಲ್ಲ, ಬರೀ ರಾಜಕೀಯ. ಕ್ರಿಕೆಟ್ ಭಾರತದ ಒಂದು ಧರ್ಮ ಆಗಿರ್ಬೇಕಾದ್ರೆ,ಕಾಮನ್ವೆಲ್ತ್ ರಾಜಕಾರಣಿಗಳಿಗೆ ಹಣ ತಿನ್ನೋ ವೇದಿಕೆಯಾಗಿದ್ರೆ, ಅದೆರಡೂ ಬೇಡ ನಮಿಗೆ, ನಮಿಗೆ ನಮ್ಮ ಸ್ವಂತ ಹಿತಾಸಕ್ತಿನೇ ಮುಖ್ಯ ಅಂತ ಇದಾರಲ್ವಾ ಕರ್ನಾಟಕದ ರಾಜಕಾರಣಿಗಳು,ಎಲ್ಲೋ ಸ್ವಲ್ಪ ತಲೆ ಕೆಟ್ಟಿದೆ ಅನ್ನಿಸ್ತಾ ಇಲ್ವಾ? ಅದೆಲ್ಲಾ ಬಿಟ್ಬಿಡಿ. ಮೊನ್ನೆ ಮೊನ್ನೆ ತಾನೆ ಇಡೀ ದೇಶಾನೇ ತನ್ನ ಕೈಯ್ಯಲ್ಲಿ ಇಟ್ಕೊಂಡು ಆಟಆಡಿಸ್ತಿದ್ದ ಅಯೋಧ್ಯೆ ವಿಷಯ ಇನ್ನೂ ಮಾಧ್ಯಮಗಳ ಎದುರು ಬಿಸಿಬಿಸಿಯಾಗಿರುವಾಗಲೇ ರಾಜಕಾರಣಿಗಳು ಅದಕ್ಕೆ ಸೊಪ್ಪು ಹಾಕದೇ ತಮ್ಮ ರಾಜಕೀಯ ಏಳಿಗೆಗೆ ಬಳಸದೇ ಇರೋದು ಇದೇ ಮೊದಲು ಅಂತ ಕಾಣುತ್ತೆ. ಮಾಧ್ಯಮಗಳೂ ಈಗ ರಾಜಕಾರಣಿಗಳ ನಿರಾಸಕ್ತಿಯನ್ನು ನೋಡಿ ತಮ್ಮೊಳಗೇ ಹಲುಬುತ್ತಿವೆಯಂತೆ! ರಾಷ್ಟ್ರ ರಾಜಕಾರಣ ಒಂದ್ ಕಡೆಗೆ ಹೋಗ್ತಾ ಇದ್ರೆ ರಾಜ್ಯ ರಾಜಕಾರಣ ಇನ್ನೊಂದ್ ತರ. ಅರ್ಥ ಮಾಡ್ಕೊಳೋಕೆ ಆಗೋದೇ ಇಲ್ಲ.
ಮೊನ್ನೆ ಮೊನ್ನೆ ಮುಖ್ಯಮಂತ್ರಿಗಳಿಗೆ ವಿರೋಧವನ್ನ ಬಹಿರಂಗವಾಗಿ ಘೋಷಿಸಿದ್ದ ಕೆಲವರು ಈಗ ಅವರ ಪರವಾಗೇ ಕೆಲ್ಸ ಮಾಡ್ತಾರೆ ಅನ್ನೋ ಸುದ್ದಿ ಇದೆ. ಎಲ್ಲೋ ತಮ್ಮ ಆಸೆ ಪೂರೈಸ್ತಾರೆ ಅನ್ನೋ ಭರವಸೆ ಬಂದಿದ್ಯೇನೋ! ಅದೇನೇ ಇರ್ಲಿ, ರೆಸಾರ್ಟ್ ರಾಜಕೀಯ ಈಗಂತೂ ಭರದಿಂದ ಸಾಗಿದೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಯೋಚಿಸದ ನಾಯಕರು ಈಗ ಜನಸೇವೆಗೋಸ್ಕರ ಮಂತ್ರಿಗಳಾಗೋಕೆ ಧರಣಿ ಮಾಡ್ತಾ ಇದಾರೆ. ಒಬ್ಬರು ಇನ್ನೊಬ್ರ ಕೈ ಹಿಡಿಯೋದು,ಬಿಡೋದು ಎಲ್ಲ ಮಾಮೂಲಾಗೇ ಹೋಯ್ತು. ಬಿಟ್ಟಿಯಾಗಿ ಸಿನಿಮಾ ನೋಡೋ ತರ ಇದೆ ಈ ಕರ್-ನಾಟಕ! ಬೇರೆ ಬೇರೆ ಪಕ್ಷದಲ್ಲಿರೋ ಖ್ಯಾತ ಅಭಿನಯಕಾರರನ್ನು ತಮ್ಮ ಕಡೆ ಎಳೆದುಕೊಂಡು ತಮ್ಮ ನಾಟಕ ಕಂಪನಿ ಉದ್ಧಾರ ಮಾಡಬೇಕು ಅನ್ನೋದು ಪ್ರತಿ ಪಕ್ಷದ ಕನಸು. ನೋಡೋಣ,ಮುಂದೆ ಯಾರ್ಯಾರು ಯಾವ್ಯಾವ ಕಂಪನಿ ಸೇರ್ತಾರೆ ಅಂತ...
0 ಪ್ರತಿಕ್ರಿಯೆಗಳು:
Post a Comment