ರಾಜಕೀಯ ಕುಲಗೆಟ್ಟುಹೋಗಿದೆ ಕಣ್ರೀ! ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಬಂತು ನೋಡಿ, ರಾಜ್ಯದ ಮೂರೂ ಮಕ್ಶಗಳೂ ನಾ ಮುಂದೆ,ತಾ ಮುಂದೆ ಅಂತ ಹಣ,ಹೆಂಡ, ಆಶ್ವಾಸನೆಗಳನ್ನು ಮತದಾರರ ಕಡೆ ಹರಿಬಿಟ್ಟಿದ್ದೆ ಬಂತು. ಈಗ ಚುನಾವಣೆ ಮುಗ್ದಿದೆ. ಹೇಗಿರುತ್ತೋ ಫಲಿತಾಂಶ ಅನ್ನೋದು ಯಾವುದೇ ಪ್ರಶ್ನೆಗೂ ಉತ್ತರವಾಗಲ್ಲ. ಜನರ ಹತ್ರ ಹೋಗಿ ಯಾರು ಗೆಲಬೇಕಪ್ಪ ಅಂತ ಕೇಳಿದ್ರೆ ಹೇಳೋದೊಂದೇ-“ಯಾರ್ ಗೆದ್ರೂ ಒಂದೇ, ಬೇಗ ಮತ್ತೊಂದ ಚುನಾವಣೆ ಬರಲಿ, ಇನ್ನೊಂದ್ ಸ್ವಲ್ಪ ಹಣ ಸಿಗುತ್ತೆ! ಕೆಲಸ ಅಂತೂ ಹೇಗೂ ಇಲ್ಲ, ಚುನಾವಣೆ ಬಂದ್ರೆ ಕೆಲಸ ಇಲ್ದೇನೇ ಕೈ ತುಂಬಾ ಹಣ. ಖಾಲಿ ಕೈ ಯಾಕೆ? ಕಮಲ,ತೆನೆ ಹೊರೋ ಮಹಿಳೆ, ಎಲ್ಲಾರ್ಗೂ ಕೆಲಸ ಮಾಡೋದು, ಎಲ್ಲರಿನ್ದಾನೂ ಹಣ ಬಾಚೋದು. ಮುಂದಿನ ಚುನಾವಣೆ ತನಕ ಬರಬೇಕಲ್ವಾ!” ಯಾರ್ ಏನೇ ಹೇಳ್ಲಿ. ಜನರು ರಾಜಕೀಯ ವ್ಯವಸ್ಥೇಲಿ ವಿಶ್ವಾಸ ಕಳೆದುಕೊಂಡಿದ್ದಾರೆ ಅನ್ನೋದೇ ಎಲ್ಲದರ ಸಾರಾಂಶ.
ಮದನಿ ಗೊತ್ತಲ್ವ? ಆ ಮಹಾನಾಯಕನೇ ರಾಜಕೀಯದಲ್ಲಿ ರಾರಾಜಿಸಬೋದು ಅನ್ನೋದಾದ್ರೆ ಸಣ್ಣ ಸಣ್ಣ ಹಣ ತಿಂದ ಹೆಸರು ಇರೋ ರಾಚಂಗೌ ಅವ್ರು ದೊಡ್ಡ ರಾಜಕೀಯ ಖಳರೇನಲ್ಲ ಬಿಡಿ. ಜೆಎಂಎಂ ಅನ್ನೋ ಪಕ್ಷದ ಅಧ್ಯಕ್ಷನಾಗಿ ಬೇರೆ ಹತ್ತುಹಲವು ಪಕ್ಷಗಳ ಜುಟ್ಟು ಹಿಡಿದಿರೋ ಶಿಬು ಸೋರೆನ್ ಅನ್ನುವ ಝಾರ್ಖಂಡ್ ಪ್ರದೇಶದ ಮಹಾನಾಯಕ ತನ್ನ ವೈಯುಕ್ತಿಕ ಲಾಭಕ್ಕೋಸ್ಕರ ಏನೇನೆಲ್ಲ ಮಾಡಬಹುದಾದರೆ,ದೇವೇಗೌಡರು ತಮ್ಮ ಮಕ್ಕಳಿಗಾಗಿ(ಮಣ್ಣಿನ ಮೊಮ್ಮಕ್ಕಳಿಗಾಗಿ) ದಿನಕ್ಕೊಂದು ಮುಖವಾದ ಧರಿಸಬಹುದಾದ್ರೆ, ಜನರೂ ಕೂಡ ದಿನಕ್ಕೊಂದೊಂದು ಪಕ್ಷಕ್ಕಾಗಿ ಕೆಲ್ಸ ಮಾಡಿ ಹಣ ಸಂಪಾದಿಸ್ಬಾರ್ದಾ? ಎಲ್ಲಾ ಹೊಟ್ಟೆಗಾಗಿ,ತುಂಡು ಬಟ್ಟೆಗಾಗಿ! ತುಂಡು ಬಟ್ಟೆ ಅನ್ನೋದೇ ಈಗ ಫ್ಯಾಷನ್ ಆಗಿರೋವಾಗ ಹಿಂದಿನ ವಾಕ್ಯದ ಬಟ್ಟೆಯ ವಿಷಯ ಗೌಣವಾಗುತ್ತೆ! ಎಲ್ಲಾ ಹೊಟ್ಟೆಗಾಗಿ,ಸ್ವಲ್ಪ ಹೆಸರಿಗಾಗಿ,ಜೊತೆಗೆ ಸ್ವಲ್ಪ ಜಾಗ-ಹಣಕ್ಕಾಗಿ ಅನ್ನೋದು ಹೆಚ್ಚು ಅರ್ಥಪೂರ್ಣ ಅನ್ಸುತ್ತೆ.
ಚುನಾವಣೆ ಬಂದಾಗ ಹತ್ತಿರ ಬರೋ ಬಣ್ಣ ಬದಲಿಸೋ ಊಸರವಲ್ಲಿಗಳಿಗೆ ಸ್ವಲ್ಪ ಬುದ್ಧಿ ಕೊಡೋ ಗೋವಿಂದಾ! ಯಥಾ ರಾಜಾ ತಥಾ ಪ್ರಜಾ ಅನ್ನೋ ಮಾತು ಈಗಂತೂ ಸತ್ಯವಾಗೋ ತರಹ ಕಾಣ್ತಾ ಇದೆ. ರಾಜನಿಗೆ ಒಳ್ಳೆಬುದ್ಧಿ ಬಂದ್ರೆ ಪ್ರಜೆಗಳೂ ಸ್ವಲ್ಪ ಒಳ್ಳೆ ದಾರಿಗೆ ಬರ್ಬೋದು ಅಂತ ನಂಬಿಕೆ (ಕಮ್ಮಿಯಾದರೂ) ಇದೆ. ಸರ್ವೇ ಜನಾಃ ಸುಖಿನೋ ಭವಂತು ಅನ್ನೋದು ಕನಸಿನಲ್ಲೂ ಗುನುಗುನಿಸುತ್ತಿರಲಿ ದೇವ!
0 ಪ್ರತಿಕ್ರಿಯೆಗಳು:
Post a Comment