ಕೇಳಿದ್ದು:
ನನ್ನ ಮಿತ್ರನೊಬ್ಬ ಸ್ವಲ್ಪ ದಿನಗಳ ಹಿಂದಷ್ಟೇ ಪುಣ್ಯಕ್ಷೇತ್ರವೊಂದಕ್ಕೆ ಹೋಗಿದ್ದ. ಅಲ್ಲಿ ಕೇಳಿದ ಒಂದು ಮಾತು-" ಮೊನ್ನೆ ಮಂಗಳೂರಿನಲ್ಲಿಆದ ವಿಮಾನ ಅಫಘಾತದಲ್ಲಿ ಎಷ್ಟು ಜನ ಸತ್ತರಲ್ವಾ? ಎಷ್ಟು ಪಾಪ. ಅದೇನೇ ಇರಲಿ, ಕೆಲವು ಮನೆಯಲ್ಲಿ ಮೂರ್ನಾಲ್ಕು ಜನ ಸತ್ತಿದ್ದಾರೆ. ಅವರ ಮನೆಯವರಿಗೆಲ್ಲ ಕಡಿಮೆಯೆಂದರೂ ನಾಲ್ಕು ಕೋಟಿ ಸಿಕ್ಕಿರುತ್ತಲ್ವ? ಎಷ್ಟು ಲಾಭ!"
ಈ ಜನರಿಗಾದರೂ ಏನಾಗಿದೆ? ಹಣಕ್ಕಾಗಿ ಯಾರಾದರೂ ಸಾಯುತ್ತಾರಾ? ಅಥವಾ ಸಾಯುವಾಗ ಅವರು 'ಸತ್ತರೆ ಮನೆಯವರಿಗೆ ಹಣ ಸಿಗುತ್ತೆ' ಎಂದು ಎಣಿಸಿಯೇ ಸಾಯುತ್ತಾರಾ? ಜನರಿಗೇಕೆ ಇದು ಅರ್ಥವಾಗೋಲ್ಲ? ಎಲ್ಲರಲ್ಲದಿದ್ದರೂ, ಹೆಚ್ಚಿನವರು ಮಾನವೀಯತೆಯ ಬಗ್ಗೆ ಅಸಡ್ಡೆ ಹೊಂದಿ ಹಣದ ಹಿಂದೆ ಓಡುತ್ತಿದ್ದಾರಾ? ಮೌಲ್ಯಗಳೇ ಮರೆತು ಹೋಗಿವೆಯೇ?
ಹೇಳಿದ್ದು:
ನನ್ನ ಸ್ನೇಹಿತರೊಬ್ಬರು (ಗುರುಗಳೂ ಕೂಡ) ಮೊನ್ನೆ ಮೊನ್ನೆ ಹೇಳಿದ ಮಾತು-"ಈ ಜನರೀಗ ಬ್ಲಾಗ್ ಪುಟದಲ್ಲಿ ಏನಾದರೂ ಸಾದಾ ಅಥವಾ ನವಿರಾದ ಲೇಖನಗಳನ್ನುಓದುವುದೇ ಕಡಿಮೆ ಮಾಡಿದಾರೆ. ಜನರ ಆಸಕ್ತಿ ಏನಿದ್ದರೂ ಮಸಾಲೆ ಮತ್ತು ಖಾರವಾದ ಲೇಖನಗಳಲ್ಲಿಯೇ! ಖಾರವಾದದ್ದೇನಾದರೂ ಬರೆದರೆ ನಮ್ಮ ಬ್ಲಾಗ್ ಪುಟ ನೋಡುವವರ ಸಂಖ್ಯೆ ತನ್ನಂತಾನಾಗೇ ಏರುತ್ತದೆ!"
ನನಗೂ ಎಷ್ಟೋ ಬಾರಿ ಹೀಗೆ ಎನಿಸಿದ್ದಿದೆ. ಯಾಕೋ ಎಲ್ಲರಿಗೂ ನೀರಿಗೆ ಕಲ್ಲೆಸೆಯುವ ಖುಷಿಗಿಂತ ಸೆಗಣಿಗೆ ಕಲ್ಲೆಸೆಯುವಾಗ ಸಿಗುವ ವಿಕೃತಾನಂದವೇ ಹೆಚ್ಚು! ಅದು ಮಾಧ್ಯಮಗಳೇ ಆಗಲಿ,ರಾಜಕಾರಣಿಗಳೇ ಆಗಲಿ, ಎಲ್ಲರಿಗೂ ಕೆಟ್ಟ ವಿಷಯಗಳನ್ನು ಕೆದುಕುವುದೇ ಪ್ರಿಯ. ಒಳ್ಳೆಯದನ್ನು ಈಗ ಭೂತಕನ್ನಡಿ ಹಿಡಿದು ನೋಡಬೇಕಾದ ಪರಿಸ್ಥಿತಿ. ಇನ್ನಾದರೂ ಜನರು ಖಾರಕ್ಕಿಂತ ಸಿಹಿಯತ್ತ ಧಾವಿಸಲೆಂದು ಆಶಿಸೋಣ.
ನೋಡಿದ್ದು:
ಅವಕಾಶವಾದಿತನ: ಇದಂತೂ ಎಲ್ಲ ವಿಚಾರಗಳನ್ನೂ ವ್ಯಾಪಿಸಿದೆ. ಜನರು ಎಲ್ಲಕ್ಕಿಂತ ಮೊದಲು ತನಗೇನು ಪ್ರಯೋಜನವೆಂದು ನೋಡುತ್ತಾರೆ. ಯಾವುದೇ ಪಕ್ಷದ ಪಾದಯಾತ್ರೆಯಿರಲಿ, ಯಾವುದೋ ರಾಜಕಾರಣಿಯ ಕೇಶಮುಂಡನವಿರಲಿ ಅಥವಾ ಇನ್ನಾವುದೇ ಇರಲಿ, ಲಾಭವೇ ಮುಖ್ಯವಾದಂತಿದೆ ಈ ವಸ್ತುನಿಷ್ಠ ಜಗತ್ತಿನಲ್ಲಿ! ಕಡೆಯ ಪಕ್ಷ ತನ್ನ ಹೆಸರಾದರೂ ರಾರಾಜಿಸಬೇಕು ಎಂದು ಎಲ್ಲರ ಆಶಯ. ಈ ಓಟದಲ್ಲಿ ಸೋಲುವವರೆಷ್ಟೋ!
ಸೋಮಾರಿತನ: ಇದೂ ಅವಕಾಶವಾದಿತನವಿದ್ದಂತೆ. ಏನೇ ಕೆಲಸ ಮಾಡಲೂ ಮೊದಲು ತನ್ನ ಲಾಭ ನೋಡಬೇಕು. ಕೆಲಸ ಮಾಡಲು ಇಷ್ಟವಿಲ್ಲದಿದ್ದರೂ ಲಾಭಾಂಶದ ಮೇಲೆಯೇ ನಿಂತಿರುತ್ತದೆ ನಿರ್ಧಾರ. ಚುನಾವಣೆ ಹತ್ತಿರವಾದಂತೆ ಅಭಿವೃದ್ಧಿ ಕೆಲಸಗಳಿಗೆ ಚುರುಕು ಮುಟ್ಟಿದಂತೆ. ಪರೀಕ್ಷೆ ಹತ್ತಿರವಾದಂತೆ ಪುಸ್ತಕಗಳ ಪುಟತಿರುಗಿಸುವುದು ಹೆಚ್ಚಾದಂತೆ! ಏನೇ ಸಣ್ಣ ಕೆಲಸ ಮಾಡಲೂ ಪ್ರಮಾಣಪತ್ರ(certificate) ಬೇಕಾಗಿದೆ ಈಗ! ಯಾವಾಗ ಈ ಸೋಮಾರಿತನಕ್ಕೆ ಮುಕ್ತಿ?
ಒಟ್ಟಿನಲ್ಲಿ, ಈ ಜನರಿದೆ ಒಳ್ಳೆಯ ಬುದ್ಧಿ ಬೇಗ ಬರಲಿ ಎಂದು ಬೇಡುವುದಷ್ಟೇ ನಮಗುಳಿದಿರುವ ಮಾರ್ಗ...
good
ReplyDeletewow..gud work...nice post...well written and interesting..keep it up...keep blogging and all the best...
ReplyDeleteBy the way
hi.........i'm a 15 year old blogger.....currently taking part in the "My Demand" contest......
please read my post n support me by voting if u find it interesting....
My post link: http://www.indiblogger.in/indipost.php?post=30629
Greetings,
Mohammed!
cgennaagi bareetiraa.... lavalavikeyinda kuDida baravaNige...
ReplyDeletenanna blog ge banni....