Sunday, February 21, 2010

55 ಪದಗಳ ಕಾದಂಬರಿ

ಇತ್ತೀಚಿನ ದಿನಗಳಲ್ಲಿ 55 ಪದಗಳ ಕಟ್ಟುಕಥೆ/ಕಾದಂಬರಿಗಳು ಇಂಗ್ಲಿಷ್ ಸಾಹಿತ್ಯ ಜಗತ್ತಿನಲ್ಲಿ/ಅಂತರ್ಜಾಲದಲ್ಲಿ 55 fiction ಬಹಳ ಪ್ರಸಿದ್ಧಿಯಾಗಿವೆ. ಕನ್ನಡದಲ್ಲಿಯೂ ಈ ರೀತಿ ಕ್ರಿಯಾತ್ಮಕ ಕಥೆಗಳು ಬರಬೇಕೆನ್ನುವುದು ಎಲ್ಲರ ಆಶಯ.ಮೊದಲ ಪ್ರಯತ್ನ ಇಲ್ಲಿದೆ.

ಅವನೊಬ್ಬ ವಿದ್ಯಾರ್ಥಿ. ಬೇರೇನೂ ಅವನಿಗೆ ತಿಳಿಯದು. ಪುಸ್ತಕವೇ ಸಂಗಾತಿ. ಜಗತ್ತಿನ ಆಗುಹೋಗುಗಳು ಆತನನ್ನು ತಲುಪುವುದೇ ಕೊನೆಗೆ.  ಗೆಳೆಯರೊಂದಿಗೆ ಕಳೆಯುವ ಕಾಲವೂ ಸ್ವಲ್ಪ.ಅದರೂ ಮನಸ್ಸು ಅವನಿಗಿಲ್ಲವೇ?  ಹೀಗಿರಲು, ಹುಡುಕಾಟ ಆರಂಭ ಪ್ರೀತಿಗಾಗಿ. ಪುಸ್ತಕದೆಡೆಗಿನ ಪ್ರೀತಿ ಕಡಿಮೆಯಾಗದಿದ್ದರೂ ಪುಸ್ತಕದೊಂದಿಗಿನ ಸಮಯ ಕಡಿಮೆಯಾಗಿತ್ತು.

















ಮನಸ್ಸಿನ ಕೊಗಳತೆ ದೂರದಲ್ಲಿ ಅವಳಿದ್ದಳು. ಅವಳಿಗೂ ಪ್ರೀತಿಯ,ಸಂಗಾತಿಯ ಚಿಂತೆ. ಸಂಗಾತಿ ಹುಡುಕುವ ಆಶಯ.






ಮುಖಾಮುಖಿ. ಪ್ರೀತಿಯ ಸಂಚಲನ. ಓದಿನ ಮಹತ್ವ ಇಬ್ಬರಿಗೂ ತಿಳಿದಿತ್ತು. ಅಮೂಲ್ಯ ಪ್ರೀತಿಯ ಕೊರತೆ ಎಲ್ಲೂ ಕಾಣಲಿಲ್ಲ. ಜೀವನ ಸಂತಸದಿ ಸಾಗಿತ್ತು.

2 ಪ್ರತಿಕ್ರಿಯೆಗಳು:

  1. tumba chennagide re.
    First time nimma blog odutidini. kannada namage swalpa kastha :)

    ReplyDelete