ಕಂಗ್ಲಿಷಿಗೊಂದು ಹಾಯ್! ಹೀಗೆ ಮೊನ್ನೆ ಏನೋ ಥಿಂಕ್ ಮಾಡ್ತಾ ಇರೋವಾಗ ಲೈಫ್-ವೈಫ್ ಒಳ್ಳೆ ಪ್ರಾಸ ಅನ್ನಿಸ್ತು. ಅಂದಮೇಲೆ ಇದೆರಡರ ಮಧ್ಯೆ ಏನೋ ಒಂದು ಸಂಬಂಧ ಇದೆ ಅಂತ ಯೋಚನೆಯಾಯ್ತು. ಅದರಲ್ಲೂ ಲೈಫ್ ದೊಡ್ಡದಾ ಅಥವಾ ವೈಫ್ ದೊಡ್ಡದಾ ಅನ್ನೋದೇ ದೊಡ್ಡ ಪ್ರಶ್ನೆ. ನಾನು ಹೇಳ್ತಾ ಇರೋದು ವೈಫ್ನ ಸೈಜ್ ಅಲ್ಲ ಅನ್ನೋದು ಗೊತ್ತಿರ್ಲಿ.
ಲೈಫಾ? ವೈಫಾ? ಅಂತ ಕೆಲವರ ಹತ್ರ ಕೇಳೋಣ ಅನ್ನಿಸ್ತು...
ಮಕ್ಕಳತ್ರ ಕೇಳಿದ್ರೆ ಅವ್ರಿಗೆ ವೈಫು ಲೈಫು ಏನೂ ಗೊತ್ತಿರಲ್ಲ ಅನ್ನಿಸಿತ್ತು. ಆದ್ರೆ ಮಕ್ಕಳ ಹತ್ತಿರ ಕೇಳಿದ ಕೂಡ್ಲೇ ವೈಫೇ ದೊಡ್ದು ಅಂದ್ಬಿಟ್ರು!ಅವ್ರಿಗೆ ಹೇಗೆ ಗೊತ್ತೋ ನನಗಂತೂ ಗೊತ್ತಿಲ್ಲ. ಟಿವಿ ಸೀರಿಯಲ್ಗಳನ್ನ ನೋಡಿ ಹಾಗೆ ಹೇಳಿದಾರೋ ಅಥವಾ ಮನೆಯಲ್ಲಿ ಅಪ್ಪ ಅಮ್ಮನ ಜಗಳ ನೋಡಿ ಹೇಳಿದರೋ ದೇವ್ರಿಗೇ ಗೊತ್ತು! ಅದೇನೇ ಇರ್ಲಿ. ಈಗಿನ ಮಕ್ಕಳು ದೊಡ್ಡವರು ಹೇಳೋ ಮಾತನ್ನಂತೂ ಈಗಲೇ ಹೇಳ್ತಾ ಇದಾರೆ...
ಇನ್ನು ಕಾಲೇಜ್ students ಹತ್ರ ಕೇಳಿದ್ರೆ ಅವ್ರಿಗೆ ಮದ್ವೆ ಅಗಿರುತ್ತ? ಖಂಡಿತ ಇಲ್ಲ.. ಅದರೂ ಅವ್ರು ಲವ್ ಅದೂ ಇದೂ ಅಂತ ತುಂಬಾ experience ಇರುತ್ತೆ ಅನ್ಬಹುದು.. ಲವ್ವೇ ಲೈಫ್ ಆಗಿರೋ ಟೈಮ್ ಅದು. ಹಾಗಾಗಿ ವೈಫ್ ಸೆಲೆಕ್ಟ್ ಮೊದಲು ಮಾಡಿ ಆಮೇಲೆ ಲೈಫ್ ಬಗ್ಗೆ ನೋಡೋಣ ಅನ್ನೋ ಜಾಯಮಾನ ಅವರದು. ಹಾಗಾಗಿ ಅವರೂ ವೈಫೇ ದೊಡ್ದು. atleast ಓದು ಮುಗಿಯೋ ತನಕನಾದ್ರೂ.
ಇನ್ನು married ಪೀಪಲ್,ಲೈಫ್ನ ಕಷ್ಟಕ್ಕಿಂತ ವೈಫ್ ಕೊಡೊ ಕಷ್ಟಾನೆ ಹೆಚ್ಚು ಅನ್ಬಹುದೇನೋ.ಹಾಗಾಗಿ ಅವರೂ ವೈಫೇ ದೊಡ್ದು ಅನ್ನೋದಂತೂ ಗ್ಯಾರಂಟೀ! ವೈಫ್ ಜೊತೆ ಹೋರಾಡಿ ಗೆದ್ರೆ ಮಾತ್ರ ಅವ್ರು ಲೈಫ್ನಲ್ಲಿ ಗೆಲ್ಲೋ ಛಲ ಬರೋಕೆ ಸಾಧ್ಯ ಅನ್ಸುತ್ತೆ.. ವೈಫೆ ಲೈಫ್ ಅನ್ನೋ ಸ್ಥಿತಿ ಪಾಪ. ಒಂದರ್ಥದಲ್ಲಿ ವೈಫ್ ಒಂದು ಲೀಡರ್ ಇದ್ದ ಹಾಗೆ. ವೈಫ್ ಹೇಳಿದ ದಾರಿ ಗಂಡಂದು.
ಇನ್ನು ಉಳಿದಿರೋರು ವೃದ್ಧರು.ಅವ್ರು ಮಾತ್ರ ಲೈಫೇ ದೊಡ್ದು ಅಂತ ನಂಬಿರೋದು ಗ್ಯಾರಂಟೀ.ಅವ್ರು ಜೀವೆನದ ಎಲ್ಲ ಸ್ಟೆಪ್ಸ್ ದಾಟಿ ಬಂದಿರೊಂದ್ರಿಂದ ಅವ್ರ ಮಾತು ನಂಬಲೆಬೇಕಾಗುತ್ತೆ. ಅವ್ರಿಗೆ ಲೈಫ್ ಅಥವಾ ವೈಫ್ ಎಸ್ಟೆ ಕಷ್ಟ ಕೊಟ್ಟಿರ್ಲಿ,ಲೈಫ್ ಅವ್ರಿಗೆ ಹೆಚ್ಚು ಕಷ್ಟ ಆಗಿ ಕಾಣೋದು ಸತ್ಯ. (ಹಾಗಂತ ವೈಫ್ನ ನಿಭಾಯ್ಸೋದು ಸುಲಭ ಅಂತ ಅವ್ರು ಹೇಳಲ್ಲ.)
ಲೈಫ್ ಅಥವಾ ವೈಫ್. ಕಾಲಾನೇ ಎಲ್ಲಾ ನಿರ್ಧರಿಸುತ್ತೆ. ಈಗಲೇ ಯಾಕೆ ಅರ್ಜೆಂಟು?

0 ಪ್ರತಿಕ್ರಿಯೆಗಳು:
Post a Comment