Friday, January 15, 2010

ಜೀವನ

ಹುದುಕಬೇಕೇ ಕಾರಣ?
ನೂರಾರು ಪ್ರಶ್ನೆಗಳ ಸಾಲೆ ಈ ಜೀವನ!

ಸೋಲಿನಿಂದಾಗಿ ನರಳಾಟ
ತಿಳಿದಿಲ್ಲವೇ ಎಲ್ಲರೂ, ಸೋಲೇ ಗೆಲುವಿನ ಸೋಪಾನ
ಗೆಲುವಿಗಾಗಿ ಪರದಾಟ 
ತಿಳಿಯಬೇಕಿದೆ,ಆಗದು ಗೆಲುವೊಂದೆ ಶಾಶ್ವತ..
ನಂಬಿಕೆಗಳಿಂದಲೇ ಜೀವನ 
ಆದರೆ ಅವೂ ನಮ್ಮನ್ನು ತಪ್ಪುದಾರಿಗೆಳೆಯಬಹುದಲ್ಲ?
ಭಾವನೆಗಳಿಂದಲೇ ರೋದನ 
ಅದನ್ನು ತಿಳಿದಿದ್ದರೂ ಭಾವನೆಗೆ ಪ್ರಾಶಸ್ತ್ಯ ಈ ಮನದಿ..


ಬೇರೆಯವರು ಮಾದರಿ
ಅದರೂ ಅವರಂತೆ ನಡೆಯಲು ಮನವು ಸೋಮಾರಿ
ತಿಳಿದಿದೆ ಸರಿದಾರಿ ಚಿಂತನೆಗೆ
ಆದರೆ ಮನ ಕೇಳದು ಚಿಂತನೆಗಳ,ಅದು ಹೇಳಿದ್ದೇ ಅದಕೆ ಸರಿ
ಪ್ರಶ್ನೆಗಳಿವೆ ಸಹಸ್ರ!
ಕೇಳುತ ಹೋದರೆ ಕೊನೆಯೇ ಇಲ್ಲ ಇಂದು ಅದಕೆಲ್ಲ 
ಕಾಡುತಿದೆ ಕೊನೆಯ ಪ್ರಶ್ನೆ,ಯಾಕೀ ಕವಿತೆ?
ಇರಬಹುದೇನೋ ಹಲವು ಪ್ರಶ್ನೆಗಳಿಗೆ ಉತ್ತರ ಇದರ ಜೊತೆ!

0 ಪ್ರತಿಕ್ರಿಯೆಗಳು:

Post a Comment