ನೀ ಮಾಡಿದ ಮೋಡಿ
ನನ್ನ ಮನವೀಗ ಬಾನಾಡಿ
ಮೋಡಗಳ ನಡುವೆ ಇದ್ದಂತಿದೆ ಪ್ರೀತಿಯ ಸುಧೆ!
ಮರುಭೂಮಿಯ ನಡುವೆಯೇ ಹಿಮದ ಸುಳಿವು
ಕಾಮನಬಿಲ್ಲಿನಲಿ ಕಾಣಲಾರಂಭಿಸಿದೆ ನೀನೆಂಬ ಎಂಟನೆಯ ಬಣ್ಣ
ಇದೆಲ್ಲ ನಿಜವೇ? ತಿಳಿಯದು ಈ ಮನಕೆ
ಗಾಳಿಯ ಕಣಕಣದಲ್ಲೂ ನಿನ್ನ ಹೆಸರ ಗೋಚರ
ನಿನ್ನ ಚಿತ್ರವಾಗಿ ಬದಲು ನಾ ಬರೆದ ಪ್ರತಿ ಅಕ್ಷರ!
ನಿನ್ನ ಕಂಡ ಕ್ಷಣದಿಂದಲೇ ನನ್ನ ನೆರಳೇ ಕಾಣೆ
ನಿನ್ನ ಪಕ್ಕದಲ್ಲಿದೆಯೇ? ಹೇಳುವೆಯಾ ಸ್ವಲ್ಪ ಹುಡುಕಿ?
ಗಡಿಯಾರದಿ ಮುಳ್ಳುಗಳೆರಡೂ ಚಲಿಸುತಿವೆ ಜೊತೆಯಾಗಿ
ಇದು ನನ್ನ ಕಲ್ಪನೆಯೂ?ಮೂರ್ಖತನವೋ? ಏನೆಂದು ಹೇಳಲಿ
ಅಥವಾ ನಾನು ಕಾಣುವುದೇ ನಿಜವಾಗಿ,ಜಗತ್ತೇ ಬದಲಾಗಿದೆಯೋ?
ಇದಂತೂ ಇನ್ನೂ ಆರಂಭ! ಇನ್ನೆಂಥ ಪರಿವರ್ತನೆ ಕಾಣಲಿದೆಯೋ ಜಗ?
ನಿನ್ನ ಜಗವೂ ಹೀಗೆ ಇದೆಯೋ? ಅದನ್ನು ನೋಡಲು ಬೇಕಿದೆ ನನಗೊಂದು ಅವಕಾಶ!
ಕೊಡು ಆ ಜಗದ ವಿಳಾಸ. ನಾ ಓಡೋಡಿ ಬರುವೆ ಕೂಡಲೇ ಅಲ್ಲಿಗೆ
ಬೇಗ ಬರಲಿ ವಿಳಾಸದ ಬಗ್ಗೆ ಸಂದೇಶ,ಹಾತೊರೆಯುತಿದೆ ಈ ಮನ..
ಕಾಯುತಲಿರುವೆ ನಿನ್ನ ನೋಡಲು,ಇರಲಿ ನನ್ನ ಬಗ್ಗೆಯೂ ಕರುಣೆ!
ಕಾಮನಬಿಲ್ಲಿನಲಿ ಕಾಣಲಾರಂಭಿಸಿದೆ ನೀನೆಂಬ ಎಂಟನೆಯ ಬಣ್ಣ
ReplyDeleteಇದೆಲ್ಲ ನಿಜವೇ? ತಿಳಿಯದು ಈ ಮನಕೆ
beautiful.........