Monday, December 7, 2009

2012-ಅಂತ್ಯವೇ?

ಎಲ್ಲರೂ 2012 ರ ಡಿಸೆಂಬರ್ ಬಗ್ಗೆ ಚಿಂತಿಸುತ್ತಿದ್ದಾರೆ.ಜಗತ್ತೇ ಆ ವಿಷಯದ ಚರ್ಚೆಯಲ್ಲಿ ಮುಳುಗಿದೆ. ಇನ್ನೂ 3 ವರ್ಷಗಳಿವೆ ಆ ಕ್ಷಣಕ್ಕಾಗಿ. ಇದು ನಿಜವೋ ಸುಳ್ಳೋ ಒಬ್ಬರಿಗೂ ತಿಳಿದಿಲ್ಲ. ಎಲ್ಲರೂ ತಮ್ಮದೇ ಆದ ವಾದಗಳಲ್ಲಿ ಮುಳುಗಿದ್ದಾರೆ.ಮಾಧ್ಯಮದ ಮಾತುಗಳೇ ನಿಜ ಎಂಬುದು ಜನರ ಅಂಬೋಣ. ಮಾಧ್ಯಮಗಳಂತೂ ಸ್ವಲ್ಪ ದಿನಗಳ ಕಾಲ ಇದೊಂದೇ ಸುದ್ದಿ ಎಂಬಂತೆ ಸುದ್ದಿ ಬಿತ್ತರಿಸುತ್ತಿದ್ದವು.


ಕೇವಲ ಉತ್ತರ ಅಮೆರಿಕಾದ ಬುಡಕಟ್ಟು ಜನರ ಮಾಯನ್ ಕ್ಯಾಲೆಂಡರ್ 2012 ರ ಡಿಸೆಂಬರ್ ನಲ್ಲಿ ಕೊನೆಯಾಗುತ್ತಿರುವುದೇ ಈ ಎಲ್ಲ ಹಾಹಾಕಾರಕ್ಕೆ ಕಾರಣವಾದಂತಿದೆ. ಕೇವಲ ಒಂದು ಕ್ಯಾಲೆಂಡರ್ ನ ದಿನಗಳು ಮುಗಿದರೆ ಜಗತ್ತು ಕೊನೆಯಾಗುವುದೇ? ಹೊಸ ಕ್ಯಾಲೆಂಡರ್ ಒಂದು ಅದರ ಹಿಂದೆಯೇ ಶುರುವಾಗುತ್ತದೆ ಎಂಬ ಚಿಂತನೆಯೇ ಕಾಣೆಯಾಗಿದೆ. ನಿಜವಾಗಿ ಹೇಳುವುದಿದ್ದರೆ 2012ರ ವಿಷಯ ಪ್ರಚಲಿತಕ್ಕೆ ಬಂದಿದ್ದೇ 2012 ಎಂಬ ಚಿತ್ರದ ಪ್ರಚಾರ ಕಾರ್ಯ ಆರಂಭವಾದ ಮೇಲೆ. ಚಿತ್ರ ತಂಡದ ಪ್ರಚಾರದ ರೀತಿಯೇ ಜನರೆಲ್ಲರೂ 2012 ಜಗತ್ತೇ ಕೊನೆಗಾಣುವ ವರ್ಷ ಎಂದು ಚಿಂತಿಸುವಂತೆ ಮಾಡಿತ್ತು. ಜನರಂತೂ-ಜಗತ್ತು ಕೊನೆಯಾಗುವ ರೀತಿ ನೋಡಲು 2012 ಪ್ರದರ್ಶಿತವಾಗುತ್ತಿರುವ ಪ್ರತಿ ಚಿತ್ರಮಂದಿರದ ಮುಂದೆ ಸಾಲುಗಟ್ಟಿ ಚಿತ್ರ ನಿರ್ಮಾಪಕರ ಕೈತುಂಬುವಂತೆ ಮಾಡಿದರು. ಚಿತ್ರದ ರೋಚಕ ದೃಶ್ಯಗಳನ್ನು ನೋಡಿ ರೋಮಾನ್ಚಿತಗೊಂಡರು,ಖುಷಿಪಟ್ಟರು,ಹೆದರಿಕೆಗೊಂಡರು ಕೂಡ.
ಇದಕ್ಕೆಲ್ಲ ಪೂರಕವೆಂಬಂತೆ ನಾಸಾದ ವಿಜ್ಞಾನಿಗಳು 2012ರಲ್ಲಿ ಭೂಮಿಗೆ ಆಕಾಶಕಾಯವೊಂದು ಬಂದಪ್ಪಳಿಸಲಿದೆ.ಇದರಿಂದ ಹಲವು ದೇಶಗಳು ನಾಶವಾಗಲಿವೆ.ಪ್ರಳಯಕ್ಕೂ ಇದೇ ಕಾರಣವಾಗಲಿದೆ ಎಂದು ಹೇಳುತ್ತಿದ್ದಾರೆ ಎಂಬ ಸುದ್ದಿಯನ್ನು ಯಾರೋ ಹರಿಬಿಡುತ್ತಿದ್ದಾರೆ. ಆಕಾಶಕಾಯವೊಂದು ಭೂಮಿಗಪ್ಪಲಿಸುವ ಭೀತಿ ಯಾವಾಗಲೂ ಇದ್ದಿದ್ದೇ. ಕೆಲವು ಆಕಾಶಕಾಯಗಳಂತೂ ವಿಜ್ಞಾನಿಗಳ ಕಣ್ತಪ್ಪಿಸಿ ತಮ್ಮ ದಾರಿಯಲ್ಲೇ ಮುಂದುವರೆಯುತ್ತಿರುತ್ತವೆ.ಅಂತಹ ಯಾವುದೋ ಒಂದು ಕಾಯ ಯಾವಾಗ ಬೇಕಾದರೂ ನಮ್ಮನ್ನಪ್ಪಳಿಸಬಹುದಲ್ಲ? ನಾಸಾದ ವಿಜ್ಞಾನಿವರ್ಗವೇ 2012ರ ಸುದ್ದಿಯನ್ನು ಪ್ರಮಾಣೀಕರಿಸಲು ಸಿದ್ಧರಿಲ್ಲ.
ಇನ್ನೊದು ವಾದವೇನೆಂದರೆ,2012ರಲ್ಲಿ ಭೂಮಿಯು 'ಕೃಷ್ಣರಂಧ್ರ'ಕ್ಕೆ ನೇರವಾಗಿ ಆ ರಂಧ್ರವೇ ನಮ್ಮನ್ನುಆಪೋಶನ ತೆಗೆದುಕೊಳ್ಳುತ್ತದೆ ಎಂಬುದು. ಹಲವು ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಆ ಕೃಷ್ಣರಂಧ್ರಈಗ ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಅಂತಹದರಲ್ಲಿ ಭೂಮಿಯ ನಾಶ ಅದರಿಂದಲೇ ಎಂದು ವಾದಿಸುವುದು ಸರಿಯಾಗದು.

ಇನ್ನು,ಭೂಮಿಯ ಹುಟ್ಟನ್ನು ಅರಿಯಲು ಯುರೋಪಿನಲ್ಲಿ ವಿಜ್ಞಾನಿಗಳು ನಡೆಸುತ್ತಿರುವ  large hadron collider ಕಾರ್ಯಾರಂಭವನ್ನು ಪುನಃ 2012ರಲ್ಲಿಮಾಡಲಿದ್ದು ಅದೇ ಭೂಮಿಗೆ ಕೊನೆಯಾಗಲಿದೆ ಎಂದೂ ವಾದವಿದೆ.ಆ ಪ್ರಯೋಗದಲ್ಲಿ ಉತ್ಪತ್ತಿಯಾಗುವ ಶಾಖ ಭೂಮಿಯನ್ನು ಕೇವಲ ಒಂದು ಕಾಲ್ಚೆಂಡಿನಾಕಾರದ ಉರಿಯುವ ಗೋಲವನ್ನಾಗಿ ಮಾಡಲಿದೆಯಂತೆ. ಆದರೆವಿಜ್ನನಿಗಲೇನು ಅಷ್ಟು ಪೆದ್ದರೆ? ಭೂಮಿಯ ಕೊನೆಯಾಗುವುದಾದರೆ ಅವರು ಆ ಪ್ರಯೋಗವನ್ನು ಮಾಡಲುಖಂಡಿತ ಸಿದ್ಧರಿರುವುದಿಲ್ಲ. ಹಾಗಾಗಿ ಖಂಡಿದ ವಿಶ್ವದ ಕೊನೆ ಅದೇ ಎಂಬ ಹೆದರಿಕೆ ಬೇಡ.
ಹೀಗೆ ಹೇಳುತ್ತಾ ಹೋದರೆ ಪುರಾವೆಗಳಿಲ್ಲದಸಾವಿರಾರು ವಾದಗಳನ್ನು ಕಾಣಬಹುದು. ಭೂಮಿಯ ಅಂತ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಅಂತ್ಯಕ್ಕೆ ಕಾರಣವಾಗಬಹುದಾದ,ಭೂಮಿಯ ಮುಪ್ಪಿಗೆ ಕಾರಣವಾಗುತ್ತಿರುವ ಪರಿಸರಮಾಲಿನ್ಯ,ಹಸಿರುಮನೆ ವಾತಾವರಣಕ್ಕೆ ಕಾರಣವಾಗುತ್ತಿರುವ ವಾಯುಮಾಲಿನ್ಯ,ಜಾಗತಿಕ ತಾಪಮಾನ ಹೆಚ್ಚಳ,ಜನಸಂಖ್ಯಾ ಸ್ಫೋಟ ಇತ್ಯಾದಿಗಳನ್ನು ತಡೆಯಲು ಪ್ರಾಮಾಣಿಕ ಪ್ರಯತ್ನಗಳಾಗಬೇಕಿದೆ. ಜಗತ್ತಿನ ಜನರೆಲ್ಲಾ ಇದಕ್ಕೋಸ್ಕರ ಕೈಜೋದಿಸಬೇಕಿದೆ.

3 ಪ್ರತಿಕ್ರಿಯೆಗಳು:

  1. maccha baduko tanaka kushiyagiroke vtu bidtha illa mate sayo bhaya yatake..

    ReplyDelete
  2. hmmm...2012 long tym!! hehe...gud 1

    ReplyDelete